ಪೇನ್, ಜೇಮ್ಸ್
1830-1898. ಇಂಗ್ಲಿಷ್ ಕಾದಂಬರಿಕಾರ. ಚೆಲ್ಟನ್ ಹ್ಯಾಮಿನಲ್ಲಿ ಹುಟ್ಟಿ ಈಟನ್, ಉಲ್‍ವಿಚ್, ಕೇಂಬ್ರಿಜ್‍ಗಳಲ್ಲಿ ವಿದ್ಯಾಭ್ಯಾಸ ಮಾಡಿದ. ಹೌಸ್ ಹೋಲ್ಡ್ ವಲ್ಡ್ರ್ಸ್ ಮತ್ತು ಚೇಂಬರ್ಸ್ ಜರ್ನಲ್‍ಗಳಲ್ಲಿ ತನ್ನ ಕೃತಿಗಳಲ್ಲಿ ಅನೇಕವನ್ನು ಪ್ರಕಟಿಸಿದ. ಚೇಂಬರ್ಸ್ ಜರ್ನಲ್ಸ್‍ಗೆ 1859-74ರವರೆಗೂ ಕಾರನ್‍ಹಿಲ್ ಮ್ಯಾಗಜಿóೀನ್‍ಗೆ 1883 ರಿಂದ 1896ರವರೆಗೂ ಸಂಪಾದಕನಾಗಿದ್ದ. ಅರವತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಈತನ ಕಾದಂಬರಿಗಳಲ್ಲಿ ಮುಖ್ಯವಾದ ಕೆಲವು ಹೀಗಿವೆ : ಲಾಸ್ಟ್ ಸರ್ ಮ್ಯಾಸಿಂಗ್‍ಬರ್ಡ್; ದಿ ಬೆಸ್ಟ್ ಆಫ್ ಹಸ್ಬೆಂಡ್ಸ್, ವಾಲ್ಟರ್ಸ್ ವರ್ಡ್, ಬೈ ಪ್ರಾಕ್ಸಿ, ಎ ವುಮನ್ಸ್ ವೆಂಜನ್ಸ್, ಕಾರ್ಲಿಯನ್ಸ್ ಇಯರ್, ತಿಕರ್‍ದ್ಯಾನ್ ವಾಟರ್, ಎ ಟ್ರೈಯಿಂಗ್ ಪೇಷಂಟ್. ಈತ ಕೆಲವು ಪದ್ಯಗಳನ್ನು ಸಾಹಿತ್ಯ ನೆನಪುಗಳನ್ನೂ ಬರೆದಿದ್ದಾನೆ.

(ಎಚ್.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ